Top stories 2 | ಇಲಿ, ಬೆಕ್ಕು,ಮತ್ತು ನಾಯಿಯ ಕಥೆ | stories

ಇಲಿ, ಬೆಕ್ಕು ಮತ್ತು ನಾಯಿಯ ಕಥೆ | Animals Story in Kannada

ಪಾಳು ಬಿದ್ದ ಮನೆಯಲ್ಲಿ |Top stories

ಒಂದಾನೊಂದು ಊರಲ್ಲಿ ಒಂದು ಪಾಳು ಬಿದ್ದಿದ್ದ ಮನೆ ಇತ್ತು. ಅದರಲ್ಲಿ ಇಲಿಗಳು , ಬೆಕ್ಕು, ನಾಯಿ ಹೀಗೆ ಒಂದಿಷ್ಟು ಪ್ರಾಣಿಗಳು ತಮ್ಮ ವಾಸಸ್ಥಾನವನ್ನಾಗಿ ಮಾಡಿಕೊಂಡಿದ್ದವು.
ಒಂದೊಂದು ಪ್ರಾಣಿಗಳು ಒಂದೊಂದು ಪ್ರತಿ ದಿನ ತಾವು ತಂದ ಆಹಾರವನ್ನು ಎಲ್ಲರೂ ಹಂಚಿ ತಿನ್ನುತ್ತಿದ್ದರು.

ಬೆಕ್ಕು ಊರಲ್ಲಿರುವ ಮನೆಗಳಲ್ಲಿ ಸಿಗುವ ಆಹಾರ ತಂದರೆ ಇಲಿಗಳು ಊರಲ್ಲಿ ಇರುವ ಧಾನ್ಯಗಳ ಸಂಗ್ರಹದಲ್ಲಿ ಹೊಕ್ಕು ಅವನ್ನು ತರುತ್ತಿದ್ದರು.
ನಾಯಿ ಊರಲ್ಲಿ ಬೀದಿಗಳಲ್ಲಿ ಬಿದ್ದಿದ್ದ ಆಹಾರ ತರುತ್ತಿತ್ತು. ಹೀಗೆ ಅವರ ಜೀವನ ಹೇಗೋ ತುಂಬಾ ಚೆನ್ನಾಗಿ ಸಾಗುತ್ತಿತ್ತು.

ಒಂದು ದಿನ ನಾಯಿಯು ಆಹಾರ ಹುಡುಕುತ್ತಾ ಊರಿನ ಬೀದಿಗಳಲ್ಲಿ ಅಲೆಯುತ್ತಿದ್ದಾಗ ಅದೇ ಬೀದಿಯಲ್ಲಿ ವಾಸವಿದ್ದ ಮತ್ತೊಂದು ನಾಯಿ ಅಲ್ಲೇ ದೂರದಲ್ಲಿ ಬಿದ್ದಿದ್ದ ಆಹಾರ ತಿನ್ನುತ್ತಿತ್ತು, ಅದನ್ನು ನೋಡಿದ ಕೂಡಲೇ ನಾಯಿಯು ಅಲ್ಲಿಗೆ ಓಡಿತು.

ಅಲ್ಲಿ ತಿನ್ನುತ್ತಿದ್ದ ನಾಯಿಯು ಇದನ್ನು ನೋಡಿ ತನ್ನ ಆಹಾರವನ್ನು ಕಿತ್ತುಕೊಳ್ಳಲು ಬಂದಿದೆ ಎಂದು ಜೋರಾಗಿ ಬೊಗಳುತ್ತಾ ಬೌ.. ಬೌ.. ಎಂದು ಬೊಗಳುತ್ತಾ ಇದರಮೇಲೆ ದಾಳಿ ಮಾಡಿತು.ಹೀಗೆ ಎರಡು ಕಿತ್ತಾಡುವಷ್ಟರಲ್ಲಿ ಅಲ್ಲಿಗೆ ಬಂದ ಬೆಕ್ಕು ಅಲ್ಲಿದ್ದ ಆಹಾರವನ್ನು ಎತ್ಕೊಂಡು ಹೋಗಿತು. ಇದನ್ನು ನೋಡಿದ ಬೇರೆ ನಾಯಿ ಬೆಕ್ಕಿನ ಹಿಂದೆ ಓಡಿತು.

ಆದರೆ ಅಲ್ಲಿದ್ದ ನಾಯಿ ನನ್ನ ಗೆಳೆಯ ಒಳ್ಳೆ ಕೆಲಸ ಮಾಡಿದ ಎಂದು ನಗುತ್ತಾ.ಅಲ್ಲಿಂದ ತನ್ನ ವಾಸಸ್ಥಾನವಾದ ಪಾಳುಬಿದ್ದ ಮನೆಕಡೆ ಪ್ರಯಾಣ ಬೆಳೆಸಿತು. ಅಲ್ಲಿಗೆ ಮೊದಲೇ ಬಂದಿದ್ದ ಬೆಕ್ಕು ಮತ್ತು ಇಲಿಗಳು ನಾಯಿ ಬರುವುದನ್ನೇ ಕಾಯುತ್ತಾ ಕುಳಿತಿದ್ದವು .

ಅಲ್ಲಿಗೆ ಸ್ವಲ್ಪ ಸಮಯದ ನಂತರ ಅಂದರೆ ಸಂಜೆ ಸಮಯ ದೂರದಲ್ಲಿ ನಾಯಿ ಬರುತ್ತಿರುವುದು ಕಂಡು ಬಂತು ಅದಕ್ಕೆ ಇಲಿ ಇವನು ಯಾಕೆ ಇಷ್ಟು ಲೇಟಾಗಿ ಬರ್ತಾ ಇದಾನೆ ನೀನು ಬಂದು ಸುಮಾರು ಸಮಯ ಆಯ್ತಲ್ಲ ಅಂತ ಕೇಳಿತು.

ಅದಕ್ಕೆ ಬೆಕ್ಕು ಅದು ನನಗೂ ಗೊತ್ತಿಲ್ಲ, ಅವನನ್ನೇ ಕೇಳಿದ್ರಾಯ್ತು ಅಂತ ಹೇಳಿತು. ಅದಕ್ಕೆ ಇಲಿ ನೀವಿಬ್ಬರು ಇವತ್ತು ಯಾವ ಕಡೆ ಹೋಗಿದ್ರಿ ಅಂತ ಕೇಳಿತು ಅದಕ್ಕೆ ಬೆಕ್ಕು ನಾವು ಊರ ದೇವಸ್ಥಾನದ ಪಕ್ಕದ ಬೀದಿಗೆ ಹೋಗಿದ್ವಿ ಇವತ್ತಂತೂ ಬೇರೆಲ್ಲೂ ಆಹಾರ ಸಿಗಲೇ ಇಲ್ಲ ಅದಕ್ಕೆ ನಾವು ಇನ್ನೇನು ಬರೀ ಕೈಲಿ ಮನೆಗೆ ಬರ್ಬೇಕಾಯ್ತಲ್ಲ ಅಂತ ಬರ್ತಿದ್ವಿ.

ಅಲ್ಲೇ ಸ್ವಲ್ಪ ದೂರದಲ್ಲಿ ಒಂದು ನಾಯಿ ಅಲ್ಲಿ ಬಿಸಾಡಿದ್ದ ಆಹಾರ ಇನ್ನುತ್ತಿರುವುದು ನಾವು ನೋಡಿದೆವು ಕೂಡಲೇ ಒಂದು ಐಡಿಯಾ ಹುಡುಕಿ ಮೊದಲು ನಾಯಿಯ ಬಳಿ ನನ್ನ ಗೆಳೆಯ ಹೋಗಿ ನಿಂತ ಅದಕ್ಕೆ ಕೆರಳಿದ ನಾಯಿ ಆಹಾರಕ್ಕಾಗಿ ತನ್ನ ಗೆಳೆಯನ ಮೇಲೆ ಮುಗಿಬಿದ್ದ.

ಇದೆ ಅವಕಾಶಕ್ಕಾಗಿ ಕಾಯುತ್ತಿದ್ದ ನಾನು ಅಲ್ಲಿದ್ದ ಆಹಾರವನ್ನೆಲ್ಲ ತಗೊಂಡು ಬಂದುಬಿಟ್ಟೆ ಹೀಗೆ ನಮ್ಮ ಪ್ಲಾನ್ ಸಕ್ಸಸ್ ಆಯ್ತು, ಇಲ್ಲಾ ಅಂದಿದ್ರೆ ಇವತ್ತು ನಾವಿಬ್ರೂ ಉಪವಾಸದಲ್ಲೇ ಇರಬೇಕಾಗಿತ್ತು.
ಎಂದು ಹೇಳಿತು. ಅದಕ್ಕೆ ಇಲಿ ಒಳ್ಳೆ ಕೆಲಸ ಮಾಡಿದ್ರಿ ಇವತ್ತು ನನಗೂ ಆಹಾರ ಸಿಗಲೇ ಇಲ್ಲ ಅಂತು.

ಅದಕ್ಕೆ ಬೆಕ್ಕು ಯಾಕೆ ಏನಾಯ್ತು ನಮಿಗೆ ಸಿಗದೆ ಇದ್ರು ನಿನಿಗೆ ಸಿಗಬೇಕಲ್ಲಾ, ವರ್ಷವಿಡೀ ಅಲ್ಲಿಂದ ನೀನು ತಂದರು ಅಲ್ಲಿ ಖಾಲಿಯಾಗಿಲ್ಲ ಆದರೂ ನಿಂಗೆ ಇವತ್ತು ಯಾಕೆ ಆಹಾರ ಸಿಗಲಿಲ್ಲ, ಅಂತ ಒಂದೇ ಸಮನೆ ಕೇಳಿತು.
ಅದಕ್ಕೆ ತಡಿ ಮಾರಾಯ ಹೇಳ್ತೀನಿ ಹೀಗೆ ಒಂದೇ ಸಮನೆ ಕೇಳಿದ್ರೆ ನಾನು ಹೇಗೆ ಹೇಳ್ಲಿ ನೀನೆ ಹೇಳು. ಅಂತ ಅಂತು. ಬೆಕ್ಕು ಕೂಡಲೇ ಸರಿ ಬೇಗ ಹೇಳು ನಾನು ಕೇಳಲೇಬೇಕು.

ಅಷ್ಟರಲ್ಲಿ ಅಲ್ಲಿಗೆ ನಾಯಿ ಓಡೋಡಿ ಬಂತು, ಅದನ್ನು ನೋಡಿದ ಇಲಿ ಯಾಕೋ ಹೀಗೆ ಓಡಿ ಬರ್ತಿದಿಯ ನಾವೇ ಎಲ್ಲ ತಿಂಡಿಬಿಡ್ತೀವಿ ಅಂತಾನ ಆದರೂ ನೀನು ಇಷ್ಟೊಂದು ಲೇಟ್ ಮಾಡಿಬಿಟ್ಟೆ ಅಂತು. ಅದಕ್ಕೆ ನಾಯಿ ನಿಮ್ಗೆಲ್ಲಾ ಒಂದು ಶಾಕಿಂಗ್ ನ್ಯೂಸ್ ಇದೆ ಕಣ್ರೋ, ಅದಕ್ಕೆ ಮದ್ಯೆ ಬಾಯಿ ಹಾಕಿದ ಬೆಕ್ಕು ಶಾಕಿಂಗ್ ನ್ಯೂಸ್ ಏನದು, ಸ್ವಲ್ಪ ಹೇಳೋದಿಕ್ಕಾದ್ರು ಬಿಡ್ರೋ ಮೊದ್ಲು ಅಂತ ರೇಗಿತು.

ಅದಕ್ಕೆ ಇಲಿ ಸರಿ ನೀನು ಹೇಳು ಅಂತು. ಅದಕ್ಕೆ ನಾಯಿ ಸರಿ ಕೇಳಿ , ನಾನು ಬೆಕ್ಕು ಇವತ್ತು ಊರಲ್ಲಿ ಬರಬೇಕಾದ್ರೆ ಅಲ್ಲಿ ಆಹಾರ ತಿನ್ನುತ್ತಿದ್ದ ನಾಯಿಯಿಂದ ಆಹಾರ ಕಿತ್ತುಕೊಂಡು ಬರ್ತಾ ಇದ್ವಿ , ಮದ್ಯೆ ಬಾಯಿ ಹಾಕಿದ ಇಲಿ ಅದು ನನಗೂ ಗೊತ್ತು ಬೆಕ್ಕು ನನಿಗೆ ಅಲ್ರೇಡಿ ಹೇಳಿದನು ಅಂತ ಅಂತು .

ಇನ್ನು ಸಿಟ್ಟಾದ ನಾಯಿ ಸ್ವಲ್ಪ ಸುಮ್ನೆ ಇರ್ತೀಯ ನಾನಿನ್ನು ಏನು ವಿಷಯ ಅಂತಾನೆ ಹೇಳಿಲ್ಲ , ಮುಂದುವರಿಸಿದ ನಾಯಿ ನಾವು ವಾಪಸ್ ಬರ್ಬೇಕಾದ್ರೆ ಬೆಕ್ಕೆನೋ ಬೇಗ ಮುಂದೆ ಓಡಿ ಓಯಿತು ಆದರೆ ನಾನು ಹಿಂದೆ ಬರ್ತಾ ಇದ್ನ ಅವಾಗ ಅಲ್ಲಿಗೆ ಒಂದು ಜೀಪ್ ಬಂದು ನಿಲ್ಲು , ಅದರಲ್ಲಿ ನಾಯಿ , ಬೆಕ್ಕುಗಳನ್ನು ಹಿಡಿಯುವ ಸಾಮಗ್ರಿಗಳನ್ನು ಇಟ್ಟುಕೊಂಡಿದ್ದರು ಅದನ್ನು ನೋಡಿ ನಾನು ಹೆದರಿದೆ ಅಲ್ಲೇ ಬಚ್ಚಿ ಕೊಂಡೆ ಆದರೆ ಅವರು ಮಾತಾಡುವುದು ಕೇಳಿಸಿಕೊಂಡೆ.

ಅವರು ಈ ಊರಲ್ಲಿ ಇರುವ ನಾಯಿ ಬೆಕ್ಕುಗಳ ಕಾಟ ಹೆಚ್ಚಾಗಿರೋದ್ರಿಂದ ಅವುಗಳ ಹಾವಳಿ ತಪ್ಪಿಸಲು ಬಂದಿದ್ದಾರೆ ಇನ್ನೂ ನಮ್ಮ ಕಥೆ ಅಷ್ಟೇ ಅಂತ ತಿಳಿದೆ. ಆಗಾಗಿ ಅವರು ನನ್ನನೇ ಮೊದಲು ಹಿಡಿದು ಬಿಟ್ಟರು ಅಂತ ನಾನು ಅವರು ಅಲ್ಲಿಂದ ಹೋಗುವವರೆಗೂ ಬರಲಿಲ್ಲ ಅದಕ್ಕೆ ಲೇಟಾಯ್ತು ಅಂತ ಹೇಳಿತು.

ಅದಕ್ಕೆ ಇಲಿ ಮತ್ತು ಬೆಕ್ಕು ಒಳ್ಳೆ ಕೆಲಸ ಮಾಡಿದೆ ಬಿಡು ನಿನ್ನ ಹಿಡ್ಕೊಂಡಿದ್ರೆ ನಮಗೆ ನೀನು ಮತ್ತೆ ಸಿಗ್ತಾ ಇರ್ಲಿಲ್ಲ , ಹೇಗೋ ತಪ್ಪಿಸಿಕೊಂಡು ಬಂದೆಯಲ್ಲಾ ನಮಗೆ ಅಷ್ಟೇ ಸಾಕು ಎನ್ನುತ್ತಾ ನಾಯಿಯನ್ನು ಅಪ್ಪಿಕೊಂಡವು.

ಈ ಮೂರು ಪ್ರಾಣಿಗಳು ಪರಸ್ಪರ ಅನ್ಯೋನ್ಯವಾಗಿದ್ದವು. ಅವುಗಳನ್ನು ನೋಡಲು ಕಣ್ಣುಗಳು ಸಾಲದು. ಮಾರನೆಯ ದಿನ ಬೆಳಿಗ್ಗೆ ಊರಿನ ಯಜಮಾನನು ಊರಿನ ಗ್ರಾಮಸ್ಥರ ಸಭೆ ಕರೆದಿದ್ದನ್ನು ಅದಕ್ಕೆ ಊರಿನ ಎಲ್ಲ ಜನರು ಭಾಗಿಯಾಗಿದ್ದರು.

ಸಮಯ ಬೆಳಿಗ್ಗೆ 10 ಗಂಟೆ ಯಾಗಿತ್ತು, ಸೂರ್ಯ ನೆತ್ತಿಯ ಮೇಲೇರ ತೊಡಗಿದ್ದ ಒಂದು ದೊಡ್ಡ ಮರದ ಕೆಳಗೆ ಊರಿನ ಗ್ರಾಮಸ್ಥರ ಸಭೆ ಸೇರಿತ್ತು. ಹೊರಗೆ ಸುಡುವ ಬಿಸಿಲು ಮರದ ಕೆಳಗೆ ತಂಪಾದ ಅನುಭವ ಎಲ್ಲರೂ ಗಜಿಬಿಜಿ ಅಂತ ಮಾತಾಡುತ್ತಾ ಕುಳಿತ್ತಿದ್ದರು .

ಅಷ್ಟರಲ್ಲಿ ಸಭೆಯನ್ನು ಉದ್ದೇಶಿಸಿ ಮುಖ್ಯಸ್ಥ ಮಾತನಾಡುತ್ತಾ, ಎಲ್ಲರಿಗೂ ತಿಳಿದಿರುವ ಹಾಗೆ ನಮ್ಮ ಊರಿನಲ್ಲಿ ನಾಯಿಗಳ ಕಾಟ ತುಂಬಾ ಜಾಸ್ತಿ ಯಾಗಿದೆ , ಅದಕ್ಕೆ ನಾವೆಲ್ಲ ಮುಖ್ಯಸ್ಥರು ಸೇರಿ ಒಂದು ನಿರ್ಧಾರಕ್ಕೆ ಬಂದಿದ್ದೀವಿ ಅದನ್ನು ನೀವೆಲ್ಲ ಒಪ್ಪಬೇಕು ಅಂತ ಅಂದ.

ಅದಕ್ಕೆ ಊರಿನ ಜನಗಳ ಮದ್ಯದಿಂದ ಒಬ್ಬ ಪ್ಯಾಂಟು ಶರ್ಟನ್ನು ಸ್ಟೈಲಾಗಿ ಹಾಕಿಕೊಂಡಿದ್ದ ವ್ಯಕ್ತಿ ಮಾತನಾಡುತ್ತಾ ನೀವುನೀವೇ ತೀರ್ಮಾನ ಮಾಡಿದ್ರೆ ನಮ್ಮನ್ನ ಯಾಕೆ ಕರೀಬೇಕು ಸ್ವಾಮಿ ಅಂತ ಅಸಡ್ಡೆಯಿಂದ ಹೇಳಿದ.
ಅದಕ್ಕೆ ಊರಿನ ಮುಖ್ಯಸ್ಥ ಸಿಡುಕುತ್ತಾ ನಾನು ಈ ಊರಿನ ಮುಖ್ಯಸ್ಥ ನಾನು ಹೇಳಿದ್ದೆ ಅಂತಿಮ ಬಾಯಿಮುಚ್ಚಿ ಕೂತ್ಕೋ ಅಂತ ಗದರಿದ ಅದಕ್ಕೆ ಮತ್ತೊಬ್ಬ ವ್ಯಕ್ತಿ ಸ್ವಾಮಿ ಅದು ಯಾವ ನಿರ್ಧಾರ ಅಂತನಾದರೂ ಹೇಳಿ ಅಂದ ಸಣ್ಣ ದ್ವನಿಯಲ್ಲಿ.

ಅದಕ್ಕೆ ಮುಖ್ಯಸ್ಥ ಹ ಹೇಳ್ತೀನಿ ನಮ್ಮ ಊರಿಗೆ ನಾಯಿ ಹಿಡಿಯುವ ತಂಡ ಬಂದಿದೆ, ಅವರಿಗೆ ನೀವೆಲ್ಲ ಸಹಕರಿಸಬೇಕು, ನಿಮ್ಮ ನಾಯಿಗಳಿದ್ದಾರೆ ಅವನ್ನು ಅವರಿಗೆ ಬಿಡುವುದಾದರೆ ಬಿಡಿ ಇಲ್ಲವಾದರೆ ಅವನ್ನು ಹೊರಗೆ ಬಿಡಬೇಡಿ ಎಂದು ಕಟ್ಟು ನಿಟ್ಟಿನ ಆಜ್ಞೆ ಹೊರಡಿಸಿದ.
ಅದಕ್ಕೆ ಜನರು ಸರಿ ಬುದ್ಧಿ ಅಂತ ಅಂದ್ರು, ಮುಖ್ಯಸ್ಥ ಇವಾಗ ಕೆಲಸ ಸುರು ಮಾಡ್ರಿ ಅಂತ ಬಂದಿದ್ದ ತಂಡಕ್ಕೆ ಸೂಚನೆ ಕೊಟ್ಟ , ಊರಿನ ಜನರಿಗೆ ನೀವಿನ್ನೂ ಹೋಗಿ ಅಂತ ಹೇಳಿದ ಜನರು ತಮ್ಮ ತಮ್ಮ ಮನೆಗೆ ಹಿಂತಿರುಗಲು ಪ್ರಾರಂಭಿಸಿದರು .

ಇತ್ತ ಪಾಳು ಬಿದ್ದಿದ್ದ ಮನೆ ಮುಂದೆ ನಿಂತು ಕೊಂಡಿದ್ದ ನಾಯಿ,ಬೆಕ್ಕು,ಇಲಿಯು ಊರನ್ನು ಸುತ್ತಿ ಬರಲು ಹೊರಟವು. ಅತ್ತ ಊರಲ್ಲಿ ಒಂದು ಕಡೆಯಿಂದ ನಾಯಿಗಳನ್ನು ಹಿಡಿಯುವ ಕಾರ್ಯ ಶುರುವಾಗಿತ್ತು.
ಒಂದು ನಾಯಿ ಇವರಿಂದ ತಪ್ಪಿಸಿಕೊಳ್ಳಲು ಯತ್ನಿಸಿ ಇವರ ಮೇಲೆ ದಾಳಿ ಮಾಡಿತು ಆದರೆ ಇವರು ಅದನ್ನು ಹಿಡಿದು ಹಾಕಿದರು, ಹೀಗೆ ಸುಮಾರು ಹೊತ್ತು ಊರಿನಲ್ಲಿ ಎಲ್ಲಾ ಹುಡುಕಿ ಹುಡುಕಿ ಹಿಡಿದು ಹಾಕಿದ್ದರು.

ಎಲ್ಲರೂ ಒಂದು ಕಡೆ ನಿಂತು ಇನ್ನೂ ಯಾವಾದ್ರೂ ಇದ್ರೆ ನೋಡಿ ಅಂತ ಹೇಳಿದರು. ಕೂಡಲೇ ಎಲ್ಲರೂ ಮತ್ತೆ ಹುಡುಕಲು ಪ್ರಾರ್ಥಿಸಿದರು. ಇತ್ತ ನಾಯಿ, ಬೆಕ್ಕು, ಇಲಿಯು ಒಂದು ಎತ್ತರದ ಸ್ಥಳದಲ್ಲಿ ನಿಂತು ಇದನ್ನೆಲ್ಲಾ ನೋಡುತ್ತಿದ್ದರು.
ನಾವು ಇಲ್ಲಿದ್ದರೆ ಖಂಡಿತ ಉಳಿಯುವುದಿಲ್ಲ ಎಂದು ಯೋಚಿಸಿ ಎಲ್ಲರೂ ಬೇರೆ ಕಡೆ ಹೋಗಲು ತೀರ್ಮಾನಿಸಿದವು.

ಮುದುಕ ಮಾಡಿದ ಸಹಾಯ | top stories

ಮುದುಕ ಮಾಡಿದ ಸಹಾಯ top stories

ಅದೇ ಊರಲ್ಲಿ ಒಂದು ಶ್ರೀಮಂತ ಮನೆಯಲ್ಲಿ ಪ್ರಾಣಿಗಳನ್ನು ಹೊರ ಹಾಕಿದ ಹಾಗೆ ಒಬ್ಬ ವ್ಯಕ್ತಿಯನ್ನು ಹೊರ ಹಾಕುತ್ತಿದ್ದರು .

ಇದನ್ನು ನೋಡಿದ ಇವರು ಎಲ್ಲರೂ ಪ್ರಾಣಿಗಳನ್ನ ಹೊರ ಹಾಕಿದ್ರೆ ಇವರೇನು ಮನುಷ್ಯನನ್ನೇ ಹೊರ ಹಾಕ್ತಿದರಲ್ಲ ಅಂದುಕೊಂಡವು. ಆ ಮನುಷ್ಯ ತುಂಬಾ ವಯಸ್ಸಾಗಿರೋ ಹಾಗೆ ಕಾಣಿಸ್ತಾ ಇದ್ದ.

ಅವನು ನಡೆಯಲು ಕಷ್ಟ ಪಡುತ್ತಾ ನಾಯಿ, ಬೆಕ್ಕು, ಇಲಿ ಇದ್ದ ಸ್ಥಳದ ಮುಂದೆ ನಡೆದು ಹೋಗುತ್ತಿದ್ದ . ಇವುಗಳು ವೃದ್ಧನ ಅವಸ್ಥೆ ನೋಡಿ ಮರುಕಪಟ್ಟವು. ಅವು ಕೂಡ ಇವನು ಎಲ್ಲಿ ಹೋಗ್ತಾನೆ ನೋಡೋಣ ಅಂತ ಅವನ ಹಿಂದೆ ಹೋಗಲು ಪ್ರಾರಂಭಿಸಿದರು.
ಮುದುಕ ತನ್ನಲ್ಲೇ ಏನೋ ಯೋಚಿಸುತ್ತಿದ್ದ ನಂತರ ಒಂದು ನಿರ್ಧಾರಕ್ಕೆ ಬಂದು ಕಾಡಿನತ್ತ ಹೋಗಲು ಪ್ರಾರಂಭಿಸಿದ ಕೂಡಲೇ ಈ ಪ್ರಾಣಿಗಳು ಅವನ ಹಿಂದೆ ಹೋಗಲು ಪ್ರಾರಂಭಿಸಿದರು.

ಸ್ವಲ್ಪ ದೂರ ಹೋಗಿದ್ದೆ ತಡ ಅಷ್ಟರಲ್ಲೇ ಹಿಡಿಯಿರಿ ಹಿಡಿಯಿರಿ ತಪ್ಪಿಸಿಕೊಂಡು ಹೋಗೋಕೆ ಬಿಡಬೇಡಿ ಅಂತ ಯಾರೋ ಕೂಗಿದ್ದು ಮುದುಕನ ಕಿವಿಗೆ ಬಿತ್ತು ಕೂಡಲೇ ಅವನು ಹಿಂತಿರುಗಿ ನೋಡಿದ, ಅವನ ಹಿಂದೆ ನಾಯಿಯನ್ನು ಹಿಡಿದು ಹೋಗಲು ಸುತ್ತುವರಿಯುತ್ತಿದ್ದರು.

ಮುದುಕನಿಗೆ ಒಂದು ಕ್ಷಣ ಅದನ್ನು ದಿಟ್ಟಿಸಿ ನೋಡಿದ ಆ ನಾಯಿಯ ಕಣ್ಣಲಿ ತನ್ನನ್ನು ರಕ್ಷಿಸು ಎಂದು ಹೇಳುವ ದಯನೀಯತೆ ಹಾಗೂ ಈ ಸಮಯ ಮುದುಕನಿಗೆ ಆ ನಾಯಿ ನನ್ನಂತೆಯೇ ಅಸಹಾಯಕತೆಯಲ್ಲಿದೆ ಎಂದು ತಿಳಿದು ಆ ತಂಡದವರಿಗೆ ನೋಡಿ ಆ ನಾಯಿ ನನ್ನದು ಅದನ್ನು ಬಿಟ್ಟುಬಿಡಿ ಅಂತ ಅಂದ.

ಅದಕ್ಕೆ ಆ ತಂಡದಲ್ಲಿದ್ದ ಮತ್ತೊಬ್ಬ ಮೊದಲೇ ಏಳಬಾರದ ತಾತ ಸ್ವಲ್ಪ ಲೇಟಾಗಿದ್ರು ಇದು ನಿಮ್ಮ ಕೈಗೆ ಸಿಗ್ತಿರಲಿಲ್ಲ ಅಂದು ಆ ನಾಯಿ ಅಲ್ಲೇ ಬಿಟ್ಟು ಹೋದರು . ನಾಯಿಗೋ ಹೋದ ಜೀವ ಮತ್ತೆ ಬಂದಂತಾಯಿತು.
ಅಲ್ಲೇ ಇದ್ದ ಇಲಿ ಮತ್ತು ಬೆಕ್ಕು ಕೂಡಲೇ ನಾಯಿಯನ್ನು ಮುತ್ತಿಟ್ಟು ಮುದುಕನಿಗೆ ಧನ್ಯವಾದ ತಿಳಿಸಿದರು. ಆ ಮುದುಕ ಅದಕ್ಕೆ ನಗುತ್ತಾ ಅಲ್ಲಿಂದ ಹೊರಟು ಕಾಡಿನ ಕಡೆ ಹೋಗುತ್ತಿದ್ದನು.

ಅವನ ಹಿಂದೆ ಹಿಂಬಾಲಿಸುತ್ತಿದ್ದ ಈ ಪ್ರಾಣಿಗಳನ್ನು ಕಂಡು ಆ ಮುದುಕ ತನ್ನಲ್ಲೇ ಈ ಪ್ರಾಣಿಗಳು ನನ್ನನೇ ಹಿಂಬಾಲಿಸುತ್ತಿವೆಯಲ್ಲ ನಾನು ಅವುಗಳಿಗೆ ಸಹಾಯ ಮಾಡಿದ್ದಕ್ಕೆ ಇರಬಹುದು ಎಂದುಕೊಂಡ.
ಈ ಪ್ರಾಣಿಗಳಿಗಿರುವ ನಿಯತ್ತು ಮನುಷ್ಯನಿಗೆ ಇಲ್ಲವಾಗಿದೆ ಬರೀ youtube, phone ಅಂತ ಕಾಲ ಕಳೆಯುವುದರಲ್ಲಿ ನಿರತರಾಗುತ್ತಾರೆ.

ಇಂತವರಿಗೆ ಎಲ್ಲಿ ನಿಯತ್ತು ಇರಲು ಸಾಧ್ಯ, ಹಾಗಂತ ಎಲ್ಲರೂ ಹಾಗೆ ಇರ್ತಾರೆ ಅಂತ ಅಲ್ಲ. ಅದರಲ್ಲೂ ಕೆಲವರು ಒಳ್ಳೆಯವರು ಇರ್ತಾರೆ ಅಂದುಕೊಂಡನು.
ಮುಂದೆ ಅವನು ಆ ಪ್ರಾಣಿಗಳನ್ನು ಕರೆದುಕೊಂಡು ಬೇರೆ ಊರಲ್ಲಿ ಅವುಗಳೊಂದಿಗೆ ಖುಷಿಯಿಂದ ಜೀವನ ಸಾಗಿಸಿದ.

YouTube channel link:- https://www.youtube.com/@publicpostkannada

ಇದನ್ನು ಓದಿ :- https://mrstorieskannada.com/sariva-samaya-jeevana-patha-kannada-story/

Leave a Reply

Your email address will not be published. Required fields are marked *