stories 1 | ಸರಿವ ಸಮಯ: ಬಾಲ್ಯದ ನೆನಪುಗಳು ಮತ್ತು ಜೀವನ ಪಾಠ | top stories

ಸರಿವ ಸಮಯ: ಬಾಲ್ಯದ ನೆನಪುಗಳು ಮತ್ತು ಜೀವನ ಪಾಠ |kannada stories

ಬಾಲ್ಯದಸಿಹಿನೆನಪುಗಳು ( kannada stories )

ದೈನಂದಿನ ಕೆಲಸ ಕಾರ್ಯಗಳ ನಡುವೆ ನಾವು ನಮ್ಮ ಬಾಲ್ಯದ ದಿನಗಳನ್ನು ಮರೆಯುತ್ತಿದ್ದೇವೆ . ಒಮ್ಮೆ ಯೋಚಿಸಿ ನೋಡಿ ನಿಮ್ಮ ಬಾಲ್ಯಕ್ಕೆ ನೀವು ಹಿಂತಿರುಗಲು ಸಾಧ್ಯವೇ, ಉತ್ತರ ಇಲ್ಲ. ನಾವು ನಡೆದುಬಂದ ದಾರಿ ಹೇಗಿದೆ ? ಅಲ್ಲಿ ಕಳೆದ ಸಮಯ ಹೇಗಿತ್ತು ? ನಮ್ಮವರು ಯಾರು ? ಹೀಗೆ ನೆನಪುಗಳ ಮೆಲುಕು ಹಾಕಿದಾಗ ಎಲ್ಲವೂ ನಮ್ಮ ಕಣ್ಣ ಮುಂದೆ ಬಂದು ಕೂರುತ್ತದೆ .

ನಾವು ಕಳೆದಂತಹ ಸಮಯವು ಯಾವುದಕ್ಕಾಗಿ ಕಳೆದಿದ್ದೇವೆ ? ಹಾಗೂ ಅದರಿಂದ ನಮಗೆ ದೊರೆತ್ತಿದ್ದಾದರೂ ಏನು ? ಉತ್ತಮರೊಂದಿಗೆ ಕಳೆದ ಕ್ಷಣಗಳು ಸ್ಮರಣೀಯವಾದರೆ ಬೆನ್ನಿಗೆ ನಿಂತಂತೆ ನಟಿಸಿದವರ ಜೊತೆಗೆ ಕಳೆದ ಕ್ಷಣಗಳು ಮತ್ತೆ ಮತ್ತೆ ನಮ್ಮನ್ನು ಕಾಡುತ್ತವೆ .

ಬಾಲ್ಯ ಎಂದಾಕ್ಷಣ ಅಲ್ಲಿ ನಡೆದ ಘಟನೆಗಳು ಸ್ನೇಹಿತರೊಂದಿಗಿನ ಆಟ ಪಾಠಗಳು ನಮ್ಮ ಬರುತ್ತದೆ . ಆ ದಿನಗಳು ಎಸ್ಟೊಂದು ಚಂದ ಇದ್ದವು ಎನಿಸದೆ ಇರಲಾರವು . ನಿಮಗೂ ಕೂಡ ಹೀಗೆ ಅನಿಸಿರಬಹುದು . ಆ ದಿನಗಳಲ್ಲಿ ಯಾವುದೇ ಚಿಂತೆಯಿಲ್ಲದೆ ಎಲ್ಲರೊಂದಿಗೆ ಬೆರೆತು ಕೂಡಿ ಕಳೆಯುತ್ತಿದ್ದೆವು . ಬಡವ ಶ್ರೀಮಂತ ಎಂಬ ಬೇಧ ಭಾವಗಳಿಲ್ಲದೆ ಎಲ್ಲರೂ ಒಟ್ಟಿಗೆ ಬೆಳೆಯುತ್ತಾ ಸಂತೋಷದಿಂದ ನಲಿಯುತ್ತಿದ್ದೆವು. ಆದರೆ ಇಂದು ಎಲ್ಲಾ ಬದಲಾಗಿದೆ ,

ಬಾಲ್ಯದಲ್ಲಿ ಹಬ್ಬಗಳು ಬಂದವೆಂದರೆ ಖುಷಿಯಿಂದ ಹೊಸ ಬಟ್ಟೆ ತೊಟ್ಟು ಹಿರಿಯರಿಗೆ ವಂದಿಸುತ್ತಾ ಹಬ್ಬಗಳನ್ನು ಆಚರಿಸುತ್ತಾ , ಇರುತ್ತಿದ್ದೆವು. ಕಾಲ ಕಳೆದಂತೆ ನಾವು ಮನೆಯ ಜವಾಬ್ದಾರಿ ಹೊತ್ತಾಗ ಗೊತ್ತಾಗುತ್ತದೆ . ಆ ಸಮಯದಲ್ಲಿ ತಂದೆ ತಾಯಿ ಪಟ್ಟಂತಹ ಕಷ್ಟಗಳು ಎಂತಹವುಗಳೆಂದು. ಅಂದು ಒಂದು ಒತ್ತು ಊಟಕ್ಕೆ ಇಲ್ಲದಿದ್ದರೂ ತಮ್ಮ ಮಕ್ಕಳಿಗೆ ಇರಲಿ ಎಂದು ಕೂಡಿಟ್ಟು ಬೆಳೆಸಿದರು . ತಾವು ಹರಕು ಬಟ್ಟೆ ಹಾಕಿದರು ತಮ್ಮ ಮಕ್ಕಳಿಗೆ ಹೊಸ ಬಟ್ಟೆ ತಂದು ಕೊಟ್ಟರು .

ತಾವು ಹರಿದ ಚಪ್ಪಲಿ ಹಾಕಿದರು ಮಕ್ಕಳ ಮುಂದೆ ಅದನ್ನು ತೋರಿಸಲಿಲ್ಲ , ಇದನ್ನು ಆ ಸಮಯದಲ್ಲಿ ಮಕ್ಕಳು ಅರಿಯಲು ಸಾಧ್ಯವೇ ? ಖಂಡಿತ ಇಲ್ಲ ಏಕೆಂದರೆ ಮಕ್ಕಳು ಆಗ ಅವರು ತಂದು ಕೊಟ್ಟ ಹೊಸ ಬಟ್ಟೆ ತೊಟ್ಟು ಖುಷಿಯಲಿರುತ್ತಾರೆ. ಈಗ ಅದೇ ಮಕ್ಕಳು ಪ್ರಾಪ್ತ ವಯಸ್ಸಿಗೆ ಬಂದು ಯಾವುದೋ ಒಂದು ನೌಕರಿ ಹಿಡಿದು ಆ ಸಮಯದಲ್ಲಿ ತಂದೆ ತಾಯಿ ಪಟ್ಟಂತಹ ಕಷ್ಟಗಳು ಅನುಭವ ಪಡೆದಾಗ ಮಾತ್ರ ಅದು ಗೊತ್ತಾಗುತ್ತದೆ . ತಮ್ಮ ತಂದೆ ತಾಯಿ ಎಸ್ಟೇ ಕಷ್ಟ ಬಂದರು ತಮ್ಮನ್ನು ಬಿಟ್ಟು ಕೊಡಲಿಲ್ಲ ಎಂಬುದು ಅರಿವಾಗುತ್ತದೆ. ಆದರೆ ಇಂದು ಎಲ್ಲರೂ ಫೇಸ್ಬುಕ್, ಯೂಟ್ಯೂಬ್, ಗೂಗಲ್, ಅಂತ ಅದರಲ್ಲೇ ಕಳೆದುಹೋಗಿದ್ದಾರೆ.

ದುರಾದೃಷ್ಟವಶಾತ್ ಈಗಿನ ಮಕ್ಕಳಿಗೆ ತಂದೆ ತಾಯಿ ಕಷ್ಟಗಳನ್ನು ಅರಿಯಲು ತಾಳ್ಮೆಯೇ ಇಲ್ಲವಾಗಿದೆ, ಅರಿತರು ಅದು ತುಂಬಾ ವಿರಳ ಹಾಗೂ ಸಮಯ ಅಷ್ಟೊತ್ತಿಗಾಗಲೇ ಮೀರುತ್ತದೆ . ಕೊನೆಯದಾಗಿ ಹೇಳುವುದೊಂದೇ ನೀವು ಏನೇ ಸಾಧನೆ ಮಾಡಿ, ಎಷ್ಟೇ ಎತ್ತರಕ್ಕೆ ಬೆಳೆಯಿರಿ, ಸಾಮಾನ್ಯ ಕೂಲಿ ಮಾಡಿದರು ಸಹ ಹೆತ್ತವರಿಗೆ ಯಾವತ್ತೂ ಕಷ್ಟ ಕೊಡಬೇಡಿ, ಅವರ ಕೈ ಬಿಡಬೇಡಿ , ಅವರಿಂದ ನೀವು, ನಿಮ್ಮಿಂದ ಅವರಲ್ಲ.

 

ಕಾಲ ಎಲ್ಲವನ್ನೂ ಕಲಿಸುತ್ತದೆ (stories)

ಕಾಲಚಕ್ರದಲ್ಲಿ ಎಲ್ಲರೂ ಮೇಲೆ ಕೆಳಗೆ ಆಗುತ್ತಾರೆ. ಜೀವನದಲ್ಲಿ ಕಷ್ಟ-ನಷ್ಟಗಳು ಪ್ರತಿಯೊಬ್ಬರಿಗೂ ಬರುತ್ತವೆ.ಸಮಯ ಕಲಿಸಿದ ಪಾಠಗಳು ಜೀವನದಲ್ಲಿ ಮರೆಯಲಾಗದ ನೆನಪುಗಳಾಗಿ ನಮ್ಮ ಮುಂದಿನ ಪಯಣಕ್ಕೆ ದಾರಿ ತೋರಿಸುತ್ತವೆ.

ಕರಿಯಪ್ಪ ಮತ್ತು ಮರಿಯಪ್ಪ ಕಥೆ

 ಉದಾಹರಣೆಗೆ ಒಬ್ಬ ಬಡ ರೈತನು ನೂರು ಕುರಿಗಳನ್ನು ಸಾಕಿದ್ದ ಅವನು ದಿನಾಲೂ ಅವುಗಳನ್ನು ಮೇಯಿಸಲು ಕಾಡಿಗೆ ಹೋಗುತ್ತಿದ್ದ . ಒಂದು ದಿನ ಅವನು ಎಂದಿನಂತೆ ತನ್ನ ಕುರಿಗಳನ್ನು ಮೇಯಿಸಲು ಕಾಡಿಗೆ ಹೊರಟಾಗ ಅವನನ್ನು ಯಾರೋ ಮಾತನಾಡಿಸುತ್ತಾ ಹೆ ಮರಿಯಪ್ಪ ನಾ ಬಂದೆ ತಡಿ ಮಾರಾಯ ಅಂತ ಕರೆದರು ಅವನು ಬೇರೆ ಯಾರು ಅಲ್ಲ ಅವನ ಗೆಳೆಯ ಕರಿಯಪ್ಪ .

ಹೀಗೆ ಇಬ್ಬರು ಕುರಿಗಳನ್ನು ಮೇಯಿಸಲು ಕಾಡಿಗೆ ಹೊರಟಾಗ ದಾರಿಯಲ್ಲಿ ಸೇತುವೆ ದಾಟಬೇಕಾಗಿತ್ತು , ಆಗ ಮರಿಯಪ್ಪ  ಕರಿಯಪ್ಪನಿಗೆ ನೀ ಮುಂದೆ ಹೋಗು ನಾ ಹಿಂದೆ ಇವುಗಳನ ಹೊಡೆದುಕೊಂಡು ಬರ್ತೀನಿ ಅಂತ ಹೇಳಿದ ಅದಕ್ಕೆ ಕರಿಯಪ್ಪ ಸರಿ ಮಾರಾಯ ಜೋಪಾನ ಅಂತ ಹೇಳಿ ಮುಂದೆ ಹೊರಟ .

ತಾನು ಒಬ್ಬಂಟಿ ಇದ್ದದ್ದ ರಿಂದ ಕರಿಯಪ್ಪ ಆ ಸಣ್ಣ ಸೇತುವೆಯನ್ನು ಸರಾಗವಾಗಿ ದಾಟಿದ ಅವನ ಹಿಂದೆ ಒಂದೊಂದೇ ಕುರಿಗಳು ಸೇತುವೆಯನ್ನು ದಾಟಲು ಮುಂದುವರಿಸಿದವು. ಇತ್ತ ಮರಿಯಪ್ಪ ಸೇತುವೆ ದಾಟಲು ಹಿಂದೇಟು ಹಾಕುತ್ತಿದ್ದ ಸಣ್ಣ ಕುರಿಮರಿಗಳನ್ನು ಒಂದೊಂದೇ ದಾಟಿಸುತ್ತಿದ್ದ .

ಎಲ್ಲ ಕುರಿಗಳು ಮತ್ತು ಕುರಿ ಮರಿಗಳು ಸೇತುವೆ ದಾಟಿದವು. ಆದರೆ ಎರಡು ಸಣ್ಣ ಮರಿಗಳು ಇನ್ನೂ ಆ ಕಡೆ ದಡದಲ್ಲಿದ್ದವು , ಮರಿಯಪ್ಪ ಅವುಗಳನ್ನು ಎರಡೂ ಕೈಗಳಲ್ಲಿ ಎತ್ತಿಕೊಂಡು ಸೇತುವೆ ದಾಟಲು ಪ್ರಾರಂಭಿಸಿದ . ಅದಕ್ಕೆ ಕರಿಯಪ್ಪ ಹುಷಾರು ಮಾರಾಯ ಬಿದ್ದು ಗಿದ್ದು ಬಿಟ್ಟೆಯಾ ಅಂತ ಹೇಳಿದ ಅದಕ್ಕೆ ಮರಿಯಪ್ಪ ದಿನಾಲೂ ಹಿಂಗೆ ನೀ ಹೇಳ್ತಾನೆ ಹಿರು ನಾ ಬೀಳ್ತಾನೆ ಇರ್ತೇನೆ ಅಂತ ರೇಗಿದ ಅದಕ್ಕೆ ಕರಿಯಪ್ಪ ಸಮಯ ಎಲ್ಲ ಒಂದೇ ತರ ಇರೋಲ್ಲ ಅಲ್ವಾ ಅದಕ್ಕೆ ಆಗಂದೆ ಅಂತ ಹೇಳಿದ.

ಇತ್ತ ಮರಿಯಪ್ಪ ಕುರಿಮರಿಗಳನ್ನು ಈಕಡೆ ದಡಕ್ಕೆ ದಾಟಿಸಿದ ಏನೋ ನೆನಪಾಗಿ ಅಯ್ಯೋ ನಾನು ನಿನ್ನ ಕೈಲಾದರೂ ಮೊದಲೇ ಕಲಿಸಲಿಲ್ಲವಲ್ಲ. ಎಂದ. ಅದಕ್ಕೆ ಕರಿಯಪ್ಪ ಏನೋ ಅದು ಅಂತ ಕೇಳಿದ ಅದಕ್ಕೆ ಮರಿಯಪ್ಪ ಊಟ ತುಂಬಿದ್ದ ಚೀಲ ಹೀಗ ಆ ದಡದಲ್ಲೇ ಇದೆ ಅದನ್ನೇ ಮರೆತುಬಂದೆ ನಾನು ಎಂದ . ಅದಕ್ಕೇನಂತೆ ನಾನು ಹೋಗಿ ತರ್ತೇನೆ ನೀನು ಇವುಗಳನ್ನು ನೋಡಿಕೋ ಎಂದು ಹೇಳಿದ ಅದಕ್ಕೆ ಮರಿಯಪ್ಪ ಬೇಡ ಮಾರಾಯ ನಾನೇ ಹೋಗಿ ತರ್ತೇನೆ ಅಂತ ಹಿಂತಿರುಗಿ ಹೋಗೆ ಹೋಗಿ ಆ ಚೀಲವನ್ನು ತಗೊಂಡ ಮತ್ತೆ ಅದೇ ಸಣ್ಣ ಸೇತುವೆಯಲ್ಲಿ ಮತ್ತೆ ಬರ ತೊಡಗಿದ ಸೇತುವೆ ಮದ್ಯಕ್ಕೆ ಬಂದಿದ್ದ ಅಷ್ಟರಲ್ಲಿ ಸೇತುವೆ ಯಾಕೋ ಅಲುಗಾಡಿದ ಹಾಗೆ ಭಾಸವಾಯಿತು ಅಷ್ಟರಲ್ಲಿ ಮರಿಯಪ್ಪ ನೀರಿಗೆ ಬಿದ್ದಿದ್ದ ಏನಾಯಿತು ಅಂತ ಕರಿಯಪ್ಪ ನೋಡಿದರೆ, ಸೇತುವೆ ಮುರಿದಿತ್ತು,

ಈಜು ಬಾರದ ಮರಿಯಪ್ಪ ನೀರಲ್ಲಿ ಬಿದ್ದಿದ್ದ ಅದನ್ನು ನೋಡಿದ ಕರಿಯಪ್ಪ ತಾನು ಈಜು ಕಲಿತದ್ದು ತನಗೆ ಸಹಾಯಕ್ಕೆ ಈಗ ಬಂದಿದೆ ಎಂದು ಕೂಡಲೇ ನೀರಿಗೆ ಹಾರಿ ಮರಿಯಪ್ಪನ ಜೀವ ಉಳಿಸಿದ ಮರಿಯಪ್ಪ ಇನ್ನೇನು ಪ್ರಾಣಾಪಾಯದಿಂದ ಕೂದಲೆಳೆ ಅಂತರದಲ್ಲಿ ಪಾರಾಗಿದ್ದ. ಕರಿಯಪ್ಪ ಮಾಡಿದ ಸಹಾಯ ನೆನೆದು ಮರಿಯಪ್ಪ ಬಿಕ್ಕಿ ಬಿಕ್ಕಿ ಅತ್ತ ಇವತ್ತು ನೀ ಇಲ್ದೆ ಇದ್ದಿದ್ರೆ ಈ ಬಡಪಾಯಿ ಜೀವ ಏನಾಗ್ತಿತ್ತೋ ನಾ ಕಾಣೆ ಎನ್ನುತ್ತ ಇದ್ದ. ಅದಕ್ಕೆ ಕರಿಯಪ್ಪ ಆಂಗ್ಯಕೆ ಹೇಳ್ತೀಯ ಮಾರಾಯ ಸ್ನೇಹಿತರು ಅಂದಮೇಲೆ ನಿನ್ನನ್ನ ನಾ ಹೇಗೆ ಸಾಯಲಿಕ್ಕೆ ಬಿಡಲಿ ಎಂದು ಸಮಾಧಾನ ಮಾಡಿದ. 

ಅಂದು ಕರಿಯಪ್ಪ ಮತ್ತು ಮರಿಯಪ್ಪ ಇಬ್ಬರು ಕುರಿಗಳನ್ನು ಮೇಯಿಸಿಕೊಂಡು ಮನೆಗೆ ಮರಳಿದರು. ಹೀಗೆ ಕುರಿಗಳನ್ನು ಮೇಯಿಸುವುದೇ ಅವರ ದೈನಂದಿನ ಕೆಲಸ ವಾಗಿತ್ತು. ಒಂದು ದಿನ ಮರಿಯಪ್ಪ ಮತ್ತು ಕರಿಯಪ್ಪ ಕುರಿ ಮರಿ ಕಳೆದು ಹೋಗಿದೆ ಎಂದು ತಿಳಿದು ರಾತ್ರಿ ಕಾಡಿಗೆ ಹೋಗಿ ಹುಡುಕಲು ತೀರ್ಮಾನಿಸಿದರು.

ಅದರಂತೆ ಮರಿಯಪ್ಪ ಹಾಗೂ ಕರಿಯಪ್ಪ ಎಲ್ಲಾ ವ್ಯವಸ್ಥೆ ಮಾಡಿಕೊಂಡು ಕಾಡಿನತ್ತ ಹೋದರು ಮಾರ್ಗಮಧ್ಯೆ ಕರಿಯಪ್ಪ ಮಾತನಾಡಿ ಏನ್ ಮರಿಯಪ್ಪ ತುಂಬಾ ಬೇಜಾರಲ್ಲಿದ್ದೀಯ ಯಾಕೆ ಅಂತ ಕೇಳಿದ ಅದಕ್ಕೆ ಮರಿಯಪ್ಪ ಏನೂ ಇಲ್ಲ ಕರಿಯಪ್ಪ ನಾವು ಹೀಗ ಒಂದು ಕುರಿ ಮರಿಯನ್ನು ಹುಡುಕಿಕೊಂಡು ಕಾಡಿಗೆ ಬಂದ್ವಿ, ಆದ್ರೆ ಅಲ್ಲಿ ನಮ್ಮ ನೂರು ಕುರಿಮರಿಗಳತ್ರ ಯಾರು ಇಲ್ಲವಲ್ಲ ಅಂತ ಚಿಂತೆಯಾಗಿದೆ ಎಂದ . ಅದಕ್ಕೆ ಕರಿಯಪ್ಪ ಚಿಂತೆ ಮಾಡ್ಬೇಡ ನಮ್ಮ ಬಿಡಾರ ಇರೋದು ಊರ ಹೊರಗೆ ನಾವು ಇಲ್ಲಿಗೆ ಬಂದಿರೋದು ಯಾರಿಗೂ ಗೊತ್ತಿಲ್ಲ ಅಲ್ಲಿ ನಾವು ಭದ್ರವಾಗಿ ಕುರಿಗಳನ್ನು ನೋಡಿಕೊಳ್ಳಲು ಒಂದು ನಾಯಿ ಬೇರೆ ಇದೆ ಮತ್ಯಾಕೆ ಚಿಂತೆ ಮಾಡ್ತೀಯ ಅಂತ ಅಂತ ಕೇಳಿದ . ಅದು ಸರಿ ಅಂತ ಮುನ್ನಡೆದ ಮರಿಯಪ್ಪ .

ಕಾಡಿನಲ್ಲಿ ತಾವು ಕುರಿಗಳನ್ನು ಮೇಯಿಸಿದ ಕಡೆಯೆಲ್ಲ ಹುಡುಕುತ್ತಾ ಹುಡುಕುತ್ತಾ ಹೋದರು, ಎಷ್ಟೇ ಹುಡುಕಿದರು ಕುರಿಮರಿ ಯಾಕೋ ಸಿಗಲಿಲ್ಲ . ಹತಾಶೆಯಿಂದ ಮರಿಯಪ್ಪ ಇನ್ನೂ ಯಾಕೋ ಮರಿಕುರಿ ಸಿಗೋ ಆಗೆ ಕಾಣಲ್ಲ ನಡಿ ಮನೆಗೆ ಹೋಗನ ಅಂತ ಅಂದ. ಅದಕ್ಕೆ ಕರಿಯಪ್ಪ ಬರೋದು ಬಂದ್ವಿ ಇನ್ನೊಂದು ಸ್ವಲ್ಪ ಹುಡುಕೋಣ ಅಂತ ಹೇಳಿದ ಹಾಗೆ ಹುಡುಕುತ್ತಾ ಸಮಯ ಹತ್ತು ಗಂಟೆಯಾಯ್ತು ಆದರೂ ಅವರಿಗೆ ಕುರಿಮರಿ ಸಿಗಲಿಲ್ಲ ಆದರೆ ಮನೆಗೆ ಹಿಂತಿರುಗಿ ಬರುವಾಗ ಸೇತುವೆ ಹತ್ತಿರ ಕುರಿಮರಿಯನ್ನು ಯಾರೋ ಕಟ್ಟಿಹಾಕಿರುವುದು ಕಂಡು ಬಂತು .

ಕರಿಯಪ್ಪ ಮರಿಯಪ್ಪ ಇಬ್ಬರು ಏನಾಯ್ತು ಅಂತ ನೋಡಲು ಹತ್ತಿರ ಬಂದರು ಕುರಿ ಮರಿಯನ್ನು ಒಂದು ಹಗ್ಗದಿಂದ ಕಟ್ಟಿದ್ದರು . ಕರಿಯಪ್ಪ ಇದು ಯಾರ ಕೆಲಸ ಇರಬಹುದು ನಿಮಗೇನಾದ್ರೂ ಗೊತ್ತಾ ಅಂತ ಮರಿಯಪ್ಪ ಕೇಳಿದ ಅದಕ್ಕೆ ಕರಿಯಪ್ಪ ಗೊತ್ತಿಲ್ಲ ಆದರೆ ಯಾರೋ ನಮ್ಮನ್ನ ಯಾಮಾರಿಸಿದ್ದಾರೆ ಅಂತ ನನಗೆ ಈಗ ಅನಿಸುತ್ತಿದೆ. ಎಂದ.

ಮರಿಯಪ್ಪನಿಗೆ ತಾವು ದೊಡ್ಡ ತಪ್ಪು ಮಾಡಿದ್ವಿ ಅನಿಸತೊಡಗಿತ್ತು . ಕೂಡಲೇ ಕರಿಯಪ್ಪನಿಗೆ ಮರೀನಾ ಎತ್ಕೊಂಡು ಬಿಡಾರಕ್ಕೆ ನಡಿ ಅಲ್ಲೇನಾಗಿದೆ ಅಂತ ನೋಡೋಣ ಅಂದ ಕೂಡಲೇ ಆಗೆ ಆಗಲಿ ಅಂತ ಕರಿಯಪ್ಪ ಕುರಿ ಮರಿಯನ್ನು ಎತ್ಕೊಂಡು ಮರಿಯಪ್ಪನ ಜೊತೆ ವೇಗವಾಗಿ ಮನೆಕಡೆ ಹೆಜ್ಜೆ ಹಾಕಿದ್ದರು. 

ಇತ್ತ ಮರಿಯಪ್ಪ ಹಾಗೂ ಕರಿಯಪ್ಪನ ಬಿಡಾರದ ಬಳಿ ನಾಲೈದು ಜನ ಮುಖಕ್ಕೆ ಮಾಸ್ಕ್ ಹಾಕಿ ಮೆಲ್ಲಗೆ ಬಿಡಾರದ ಬಳಿ ಬರುತ್ತಿದ್ದರು . ಅವರಲ್ಲೊಬ್ಬ ಲೊ ನಾವು ತುಂಬಾ ತಡ ಮಾಡಿದ್ವಿ ಕಣೋ. ಇಷ್ಟೊತ್ತಿಗೆ ಅವರು ವಾಪಸ್ ಬರ್ತಿರ್ತಾರೆ ಏನ್ ಮಾಡೋದು ಅಂತ ಅಂದ. ಅದಕ್ಕೆ ಮತ್ತೊಬ್ಬ ಎನ್ ಮಾಡೋದು ಅಂದ್ರೆ ನಾಲ್ಕು ಜನನು ಒಂದೊಂದು ಕುರಿ ಎತ್ಕೊಂಡು ಬೇಗ ಇಲ್ಲಿಂದ ಜಾಗ ಖಾಲಿ ಮಾಡೋದು ಅಂದ ಹೀಗೆ ಅವರಲ್ಲೇ ಮಾತಾಡ್ಕೊಂಡು ಮೆಲ್ಲಗೆ ಬಿಡಾರದ ಹತ್ತಿರ ಬಂದರು ಎಲ್ಲರೂ ಅಲ್ಲೇ ನಿಂತುಬಿಟ್ಟರು .

ಏಕೆಂದರೆ ಅವರಿಗೆ ಅಲ್ಲಿ ನಾಯಿ ಎದುರಿಗೆ ಬಂತು , ಅವರಲ್ಲೊಬ್ಬ ಈ ನಾಯಿ ಏನ್ ಮಹಾ ಅಂದುಕೊಂಡು ಅದನ್ನು ಓಡಿಸಲು ಹತ್ತಿರ ಹೋಗಬೇಕು ಅನ್ನುವಷ್ಟರಲ್ಲಿ ಮತ್ತೊಬ್ಬ ತಡೆದು ಇರು ಅದು ಇನ್ನೂ ನಮ್ಮನ್ನ ನೋಡಿಲ್ಲ ಅದು ನೋಡಿದ್ರಾ ಒಳಗೆ ನಾವು ಕೆಲಸ ಮುಗಿಸಬೇಕು ಅಂದ . ಅದಕ್ಕೆ ಎಲ್ಲರೂ ಸರಿ ಅಂದು ಅಲ್ಲೇ ಮರೆಯಾದರೂ . ನಾಯಿ ತಾನು ಮಲಗಿದ್ದ ಜಾಗದಲ್ಲೇ ಮತ್ತೆ ಹೋಗಿ ಮಲಗಿತು. ಇದೇ ಸಂದರ್ಭದಲ್ಲಿ ನಾಲ್ವರು ಬಿಡಾರವನ್ನು ಹೊಕ್ಕರು ಅಲ್ಲಿ ನೂರಕ್ಕೂ ಹೆಚ್ಚು ಕುರಿಗಳನ್ನು ನೋಡಿ ನಾಲ್ಕು ಕುರಿಗಳನ್ನು ಎತ್ತಿಕೊಂಡು ಹೊರಬರ್ತ ಇದ್ದರು ಇನ್ನೇನು ಅಲ್ಲಿಂದ ಪರಾರಿ ಹೋಗಬೇಕು ಅನ್ನುವಷ್ಟರಲ್ಲಿ ಒಬ್ಬನ ಕಾಲಿಗೆ ಏನೋ ಕಚ್ಚಿದಂತಾಯಿತು ಏನು ಅಂತ ನೋಡಿದ್ರೆ ಅಲ್ಲಿ ನಾಯಿ ಆತನ ಕಾಲಿಗೆ ಕಚ್ಚಿತ್ತು.

ಕೂಡಲೇ ಅವನು ತನ್ನ ಕೈಯಲ್ಲಿದ್ದ ಕುರಿಯನ್ನು ಬಿಟ್ಟು ಚೀರಾ ತೊಡಗಿದ . ಇದನ್ನು ನೋಡಿದ ಉಳಿದ ಮೂವರು ಈ ನಾಯಿ ಮಲಗಿತ್ತು ತಾನೇ ಅಂತ ಅಂದುಕೊಂಡಿದ್ದೆ ನಮ್ಮ ತಪ್ಪಾಯ್ತು ಇನ್ನೂ ನಮ್ಮ ಕತೆ ಮುಗೀತು ಅಂತ ಬೇಗ ಬೇಗ ಓಡಲು ಪ್ರಾರಂಬಿಸಿದರು. ಅದನ್ನು ನೋಡಿದ ನಾಯಿ ಕೂಡಲೇ ಒಬ್ಬನ ಮೇಲೆರಗಿ ಅವನನ್ನು ಕೆಳಗೆ ಬೀಳಿಸಿತು. ಆದರೆ ಇನ್ನಿಬ್ಬರು ಅಷ್ಟರಲ್ಲಿ ಕುರಿ ಸಮೇತ ಅಲ್ಲಿಂದ ತಪ್ಪಿಸಿಕೊಂಡಿದ್ದರು. ನಾಯಿ ಬೊಗಳುತ್ತಾ ಇತ್ತು ಅಲ್ಲೇ ಬಿದ್ದಿದ್ದ ಇಬ್ಬರು ಭಯದಿಂದ ನಡುಗಿದರು.

ಕೂಡಲೇ ಒಬ್ಬನಿಗೆ ಒಂದು ಇಡಿಯ ಬಂತು. ಅವನು ಕೂಡಲೇ ತನ್ನ ಬಳಿಯಿದ್ದ ಚೀಲವನ್ನು ನಾಯಿಮೇಲೆ ಹಾಕಿ ಅಲ್ಲಿಂದ ತಪ್ಪಿಸಿಕೊಳ್ಳಲು ಯತ್ನಿಸಿದರು , ಅದರಲ್ಲಿ ಯಶಸ್ವಿಯೂ ಆದರೂ ಅಬ್ಬಾ ಉಳಿತು ಜೀವ ಇದರ ಸಹವಾಸವೇ ಬೇಡ ಅಂತ ಹೋದರು. ಇನ್ನಿಬ್ಬರು ಕಳ್ಳರು ತಮ್ಮ ಸಂಚನ್ನು ಸಫಲ ಗೊಳಿಸಿದರು. ಇತ್ತ ಮರಿಯಪ್ಪ ಮತ್ತು ಕರಿಯಪ್ಪ ಬಿಡಾರಕ್ಕೆ ಹತ್ತಿರ ಬರುತ್ತಿದ್ದಂತೆ ಅವರಿಗೆ ಎಲ್ಲವೂ ತಿಳಿಯಿತು ಅಲ್ಲಿ ನಾಯಿಯು ಬೊಗಳುತ್ತಾ ಒಂದುಕಡೆ ತೋರಿಸುತ್ತಾ ಇತ್ತು .

ಉಳಿದ ಎರಡು ಕುರಿಗಳು ಅಲ್ಲೇ ನಿಂತಿದ್ದವು . ಅದನ್ನು ನೋಡಿದ ಮರಿಯಪ್ಪ ನಾನು ಏನು ಆಗಬಾರದು ಅಂದುಕೊಂಡಿದ್ದೇನೋ ಅದೇ ಆಗಿದೆ ಅಂತ ಬಿಕ್ಕಿ ಬಿಕ್ಕಿ ಅಳತೊಡಗಿದ , ಅಷ್ಟರಲ್ಲಿ ಕರಿಯಪ್ಪ ಸಮಾಧಾನ ಮಾಡುತ್ತಾ ನಾನು ಕುರಿಗಳನ್ನು ಎಣಿಸಿ ನೋಡುತ್ತೇನೆ ಇರು ಅಂತ ಹೇಳಿ ಬಿಡಾರದಲ್ಲಿದ್ದ ಕುರಿಗಳನ್ನು ಎನಿಸಿದ ನಾಲ್ಕು ಕುರಿಗಳು ಕಡಿಮೆ ಬಂದವು ಕೂಡಲೇ ಹೊರಬಂದು ಮರಿಯಪ್ಪನಿಗೆ ನಾಲ್ಕು ಕುರಿ ಇಲ್ಲ ಎಂದನು ಕೂಡಲೇ ಬಿಡಾರದ ಹೊರಗಿದ್ದ ಎರಡು ಕುರಿಗಳನ್ನು ನೋಡಿ ಮರಿಯಪ್ಪ ನೋಡು ಈ ನಾಯಿ ಇರೋದ್ರಿಂದ ಈ ಎರಡು ಕುರಿಗಳದ್ರು ಉಳಿದುಕೊಂಡುವು ಎಂದು ನಾಯಿಯನ್ನು ತಬ್ಬಿ ಅಳತೊಡಗಿದ ಅದಕ್ಕೆ ಕರಿಯಪ್ಪ ಇರಲಿ ಬಿಡು ಅದು ಅದರ ಕೈಲಾದ ಕರ್ತವ್ಯ ಮಾಡಿದೆ ಅಂತ ಸಮಾಧಾನ ಮಾಡಿದ. ಮುಂದೆ ಈ ರೀತಿ ಆಗದಂತೆ ನೋಡಿಕೊಳ್ಳೋಣ ಎಂದ.

Website:- mrstorieskannada.com

YouTube channel link:- https://www.youtube.com/@publicpostkannada

Leave a Reply

Your email address will not be published. Required fields are marked *