today ipl match kannada 1 | rcb top match ಗೆಲ್ಲುತ್ತಾ?

today ipl match kannada  Opening match rcb vs srh

2026 ಐಪಿಎಲ್ ಗೆ ಸ್ವಾಗತ 🙏 today ipl match kannada 

ಇನ್ನೇನು 2026 ಐಪಿಎಲ್ ಶುರುವಾಗುವ ಹಂತದಲ್ಲಿದೆ, ಆಗಲೇ ಐಪಿಎಲ್ ನ ಕಾವು ಹೆಚ್ಚಾಗುತ್ತಿದೆ. today ipl match kannada ಎಲ್ಲಾ ಕಡೆಯೂ ಕೂಡ ಐಪಿಎಲ್ ನ ಓಪನಿಂಗ್ ಮ್ಯಾಚ್ ಬಗ್ಗೆಯೇ ಊಹಾ ಪೋಹಗಳು ಹರಿದಾಡಲು ಪ್ರಾರಂಭಿಸಿವೆ.

 ಈ ಬಾರಿಯ ಐಪಿಎಲ್ ಆವೃತ್ತಿಯು ಭಾರತದಲ್ಲಿ ನಡೆಯಲಿದ್ದು, ಎಲ್ಲಾ ಐಪಿಎಲ್ ಪ್ರಾಚೈಸಿ ತಂಡಗಳು ತಮ್ಮ ತಮ್ಮ ತವರು ಕ್ರೀಡಾಂಗಣದಲ್ಲಿ ಸಜ್ಜಾಗಿವೆ. 

ಆರ್ಸಿಬಿ ತಂಡವು ಕಳೆದ ಬಾರಿಯ ಚಾಂಪಿಯನ್ ತಂಡ, ಆದರೆ ಕಳೆದಬಾರಿ ನಡೆದ ದುರ್ಘಟನೆಯಿಂದ ತವರು ಪಂದ್ಯಗಳನ್ನು ಬೇರೆಡೆಗೆ ಸ್ಥಳಾಂತರಿಸಲು ಸೂಚಿಸಲಾಗಿದೆ, ಕಳೆದ ವರ್ಷ ಸೆಲೆಬ್ರೇಷನ್ ಟೈಮ್ ನಲ್ಲಿ ಆದ ಅವಘಡ ದಿಂದ ಇಲ್ಲಿನ ಎಲ್ಲ  ಪಂದ್ಯಗಳಿಗೆ ಆಡುವುದನ್ನು ನಿರಾಕರಿಸಲಾಗಿತ್ತು.  ಆದರೆ ಆರ್ಸಿಬಿ ಅಭಿಮಾನಿಗಳ ಆಸೆಯಂತೆ ಹಾಗೂ ಕರ್ನಾಟಕ ಕ್ರಿಕೆಟ್ ಮಂಡಳಿ, ಆರ್ಸಿಬಿ ಪ್ರಾಚೈಸಿ ಹೋರಾಟದ ಫಲವಾಗಿ ರಾಯಲ್ ಚಾಲೆಂಜರ್ಸ್‌ ಬೆಂಗಳೂರು ತಂಡದ ಪಂದ್ಯಗಳು ಬೆಂಗಳೂರಲ್ಲೇ ನಡೆಯುತ್ತಿದ್ದವು. ಇದೆಲ್ಲ ನಿಮಗೆ ತಿಳಿದಿರುವ ವಿಷಯವೇ. 

2026 ರ ಐಪಿಎಲ್ ಆವೃತ್ತಿಯ ಓಪನಿಂಗ್ ಮ್ಯಾಚ್ 28 ಮಾರ್ಚ್ 2026 ರಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಸನ್ ರೈಸಸ್ ಹೈದರಾಬಾದ್ ವಿರುದ್ಧ ಬೆಂಗಳೂರಿನಲ್ಲಿ ನಡೆಯಲಿದೆ ಐಪಿಎಲ್ ಓಪನಿಂಗ್ ಸೆಲೆಬ್ರೇಷನ್ ಅದ್ದೂರಿಯಾಗಿ ನಡೆಯಲಿದೆ. ಅಲ್ಲದೆ ಈ ಮೊದಲು ಆರ್ಸಿಬಿ vs ಕೆಕೆಆರ್  ಓಪನಿಂಗ್ ಮ್ಯಾಚ್ ಆಡಿಸುವ ಸುದ್ದಿ ಹರಿದಾಡುತ್ತಿತ್ತು. ಆದರೆ ಈ ಎಲ್ಲ ಊಹಾ ಪೋಹಗಳು ಸುಳ್ಳಾಗಿ ಕೊನೆಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು vs ಸನ್ ರೈಸಸ್ ಹೈದರಾಬಾದ್ ತಂಡಗಳು ಸೆಣೆಸಾಡಲಿವೆ. 

ಈ ಪಂದ್ಯಕ್ಕೆ ಎರಡೂ ತಂಡದ ಅತ್ಯುತ್ತಮ ಆಟಗಾರರು ಯಾರೆಂಬುದನ್ನು ಈ ಕೆಳಗೆ ತಿಳಿಯೋಣ 

today ipl match kannada

Ipl Opening match ಪ್ಲೇಯರ್ rcb vs srh

Rcb vs srh ತಂಡದ ಪ್ಲೇಯರ್ಸ್ 2026 ipl

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಅತ್ಯುತ್ತಮ ಆಟ 11

ಕೋಚ್:- ಆಯಂಡಿ ಫ್ಲವರ್ 

1. ವಿರಾಟ್ ಕೊಹ್ಲಿ 

2. ಫಿಲ್ ಸಾಲ್ಟ್ 

3. ವೆಂಕಟೇಶ್ ಐಯ್ಯರ್ 

4. ರಜತ್ ಪಾಟೀದಾರ್ (ಕ್ಯಾಪ್ಟನ್)

5. ಜಿತೇಶ್ ಶರ್ಮಾ (ವೈಸ್ ಕ್ಯಾಪ್ಟನ್) (wk)

6. ಟಿಮ್ ಡೇವಿಡ್

7. ರೋಮರಿಯೋ ಷಫರ್ಡ್ 

8. ಕುನಾಲ್ ಪಾಂಡ್ಯ

9. ನುವಾನ್ ತುಷಾರ್

10. ಭುವನೇಶ್ವರ್ ಕುಮಾರ್

೧೧. ಯಶ್ ದಯಾಳ್ 

ಇಂಪ್ಯಾಕ್ಟ್ ಪ್ಲೇಯರ್ಸ್ 

ದೇವದತ್ ಪಡಿಕ್ಕಲ್, ಜಾಕೋಬ್ ಬೆಥೆಲ್, ಜೋರ್ಡಾನ್ ಕಾಕ್ಸ್, ಸ್ವಪ್ನಿಲ್ ಸಿಂಗ್.

ಸನ್ ರಿಸರ್ಸ್ ಹೈದರಾಬಾದ್ ತಂಡದ ಅತ್ಯುತ್ತಮ ಆಟ 11 

1. ಅಭಿಷೇಕ್ ಶರ್ಮಾ

2. ಟ್ರಾವಿಡ್ ಹೆಡ್

3. ಇಶಾನ್ ಕಿಶನ್ (ವಾರ)

4. ನಿತೀಶ್ ಕುಮಾರ್ ರೆಡ್ಡಿ

5. ಲಿಯಾಮ್ ಲಿವಿಂಗ್ಸ್ಟೋನ್ 

6. ಹೆನ್ರಿಚ್ ಕ್ಲಾಸೆನ್

7. ಅಂಕಿತ್ ವರ್ಮ 

8. ಪ್ಯಾಟ್ ಕಮಿನ್ಸ್ (ಕ್ಯಾಪ್ಟನ್)

9. ಹರ್ಷಲ್ ಪಟೇಲ್

10. ಜಯದೇವ್ ಉನದ್ಕತ್ 

೧೧. ಶಿವಂ ಮಾವಿ 

ಇಂಪ್ಯಾಕ್ಟ್ ಪ್ಲೇಯರ್ಸ್ 

ಕಮಿಂಡು ಮೆಂಡಿಸ್, ಶಾಕಿಬ್ ಹುಸೇನ್, ಇಶಾನ್ ಮಾಲಿಂಗ , ಹರ್ಷ ದುಬೆ. 

ಈ ಎರಡು ತಂಡಗಳು ತುಂಬಾನೇ ಬಲಿಷ್ಠವು . ಆದರೆ ಪ್ಲೇಯರ್ ಗೆ ಪ್ಲೇಯರ್ ನೋಡಿದಾಗ ಯಾವ ತಂಡ ಬಲಿಷ್ಟವಾಗಿದೆ ಎಂದು ತಿಳಿಯುತ್ತದೆ. 

ಓಪನಿಂಗ್ ವಿಭಾಗ RCB vs SRH

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲಿ ಓಪನಿಂಗ್ ಜೋಡಿಯಾಗಿ ವಿರಾಟ್ ಕೊಹ್ಲಿ ಮತ್ತು ಪಿಲ್ ಸಾಲ್ಟ್ ಕಳೆದ ಬಾರಿಯಂತೆ ಇನ್ನಿಂಗ್ಸ್ ಆರಂಭಿಸುತ್ತಾರೆ. ಇವರಿಬ್ಬರು ತುಂಬಾನೇ ಬಿರುಸಿನಿಂದ ರನ್ ಕಲೆ ಹಾಕುವುದರಲ್ಲಿ ಸಂದೇಹವೇ ಇಲ್ಲ. ಇವರಿಬ್ಬರು ನಿಂತರೆ ಎದುರಾಳಿಯ ಬೌಲರ್ ನಡುಗಿ ಹೋಗ್ತಾನೆ . ಕಳೆದ ಬಾರಿ ಈ ಜೋಡಿ ಉತ್ತಮ ಪ್ರದರ್ಶನ ನೀಡಿದ್ದರಿಂದಲೇ ಉಳಿದ ಬ್ಯಾಟರ್ಗಳು ಸರಾಗವಾಗಿ ರನ್ ಕಲೆಹಾಕಲು ಸಾಧ್ಯವಾಯಿತು.

ಇತ್ತ ಸನ್ ರೈಸಸ್ ಹೈದರಾಬಾದ್ ತಂಡದ ಓಪನಿಂಗ್ ಜೋಡಿಯಾಗಿ ಅಭಿಷೇಕ್ ಶರ್ಮಾ ಮತ್ತು ಟ್ರಾವಿಸ್ ಹೆಡ್ ಆಡುತ್ತಾರೆ. ಈ ಜೋಡಿ ಬರಿ ಪವರ್ ಪ್ಲೇ ನಲ್ಲೇ ಮ್ಯಾಚುಗಳನ್ನು ಚೇಂಜ್ ಮಾಡುವ ತಾಕತ್ತು ಈ ಜೋಡಿಗಿದೆ. ಅಭಿಷೇಕ್ ಶರ್ಮಾ ಇತ್ತೀಚೆಗೆ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಭಾರತದ ಪರ ಅಷ್ಟಾಗಿ ಉತ್ತಮ ಪ್ರದರ್ಶನ ನೀಡುವಲ್ಲಿ ವಿಫಲವಾಗಿದ್ದಾರೆ. ಆದರೆ ಅವರು ತಮ್ಮ ಹಳೆ ಲಯಕ್ಕೆ ಮರಳಲು ಉತ್ಸುಕರಾಗಿದ್ದಾರೆ.

ಮಧ್ಯಮ ಕ್ರಮಾಂಕ 

ಮಧ್ಯಮ ಕ್ರಮಾಂಕದಲ್ಲಿ ಎರಡೂ ತಂಡಗಳು ಬಲಿಷ್ಟ ಆಟಗಾರರನ್ನು ಹೊಂದಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರ ವೆಂಕಟೇಶ್ ಅಯ್ಯರ್ ಬಿರುಸಿನ ಇನ್ನಿಂಗ್ಸ್ ಕಲೆ ಹಾಕಿದರೆ , ನಾಯಕ ರಜತ್ ಪಾಟೀದಾರ್ ಸ್ಪಿನ್ ಬೌಲರ್ ಗಳ ಇನ್ನಿಲ್ಲದೆ ಕಾಟ ಕೊಡುತ್ತಾರೆ ಇನ್ನೂ ಜಿತೇಶ್ ಶರ್ಮಾ, ಟಿಮ್ ಡೇವಿಡ್, ಕೃನಾಲ್ ಪಾಂಡ್ಯ , ರಂತಹ ಆಟಗಾರರು ಎದುರಾಳಿ ಬೌಲರ್‌ಗಳ ಬೆಂಡೆತ್ತುವರು. ಕಳೆದ ಬಾರಿ csk ವಿರುದ್ಧ ಅಬ್ಬರಿಸಿದ್ದ ರೋಮರಿಯೋ ಶಫರ್ಡ್ ಕೂಡ ತಂಡದಲ್ಲಿರುವುದರಿಂದ ಬ್ಯಾಟಿಂಗ್ ಚಿಂತೆ ಇಲ್ಲವಾಗಿದೆ.

ಇತ್ತ ಸನ್ ರೈಸಸ್ ಹೈದರಾಬಾದ್ ಬಲಿ ತಂಡ ಮದ್ಯಮ ಕ್ರಮಾಂಕವು ತುಂಬಾ ಷ್ಠವಾಗಿ ಕಾಣುತ್ತದೆ. ಟಿ20 ನಲ್ಲಿ ಮಿಂಚಿದ್ದ ಇಶಾನ್ ಕಿಶನ್ ಈ ಬಾರಿಯ ಐಪಿಎಲ್ ನಲ್ಲಿಯೂ ಅದೇ ಆಕ್ರಮಣ ಆಡುವ ಸಾಧ್ಯತೆ ಇದೆ ನಿತೀಶ್ ಕುಮಾರ್ ರೆಡ್ಡಿ , ಲಿಯಂ ಲಿವಿಂಗ್ ಸ್ಟೋನ್ ಎಂದಿನಂತೆ ಆಡಬಹುದು. ಹೆನ್ರಿಚ್ ಕ್ಲಾಸೆನ್, ಪ್ಯಾಟ್ ಕಮಿನ್ಸ್ ಎದುರಾಳಿ ತಂಡದ ಬೌಲರ್‌ಗಳ ಬೆಂಡೆತ್ತುವುದರಲ್ಲಿ ಅನುಮಾನವಿಲ್ಲ .

ಬೌಲಿಂಗ್ ವಿಭಾಗ 

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರ ಅನುಭವಿ ಭುವನೇಶ್ವರ್ ಕುಮಾರ್, ಯಶ್ ದಯಾಳ್, ಹಾಗೂ ಹೆಜ್ಲ್ವುಡ್ ಇದ್ದಾರೆ, ಮತ್ತು ಮಾಲಿಂಗ ರೀತಿಯಲ್ಲಿ ಬೌಲಿಂಗ್ ಮಾಡಿ ಎದುರಾಳಿ ಬ್ಯಾಟರಿಗಳನ್ನು ನಡುಗಿಸಬಲ್ಲ ನುವಾನ್ ತುಷಾರ್ ಕೂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಉತ್ತಮ ಬೌಲಿಂಗ್ ಪ್ರದರ್ಶನ ನೀಡುವುದರಲ್ಲಿ ಅನುಮಾನ ವಿಲ್ಲ .ಇನ್ನೂ ಸ್ಪಿನ್ ಬೌಲಿಂಗ್ ವಿಭಾಗಕ್ಕೆ ಬರುವುದಾದರೆ ಕೃನಾಲ್ ಪಾಂಡ್ಯ ತಮ್ಮ ವಿಶಿಷ್ಟ ಸ್ಪಿನ್ ಬೌಲಿಂಗ್ ಮೂಲಕ ಎದುರಾಳಿ ಬ್ಯಾಟಿಂಗ್ ವಿಭಾಗವನ್ನು ನುಚ್ಚು ನೂರು ಮಾಡುವ ತಾಕತ್ತನ್ನು ಹೊಂದಿದ್ದಾರೆ. 

 

ಸುಯಶ್ ಶರ್ಮಾ ಕಳೆದ ಬಾರಿ ಅತ್ಯುತ್ತಮವಾಗಿ ಸ್ಪಿನ್ ಬೌಲಿಂಗ್ ಮಾಡಿ ತಮ್ಮ ಛಾಪನ್ನು ಮಾಡಿಕೊಂಡಿದ್ದಾರೆ.

ಸನ್ ರೈಸಸ್ ಹೈದರಾಬಾದ್ ತಂಡದ ಪರ ಅನುಭವಿ ಬೌಲರ್ ಪ್ಯಾಟ್ ಕಮಿನ್ಸ್ ಇನ್ನೂ ತಂಡಕ್ಕೆ ಲಭ್ಯವಿರುವ ಬಗ್ಗೆ ಇನ್ನೂ ಕ್ರಿಕೆಟ್ ಆಸ್ಟ್ರೇಲಿಯಾ ಖಚಿತ ಪಡಿಸಿಲ್ಲದ ಕಾರಣ ಅವರು ಓಪನಿಂಗ್ ಮ್ಯಾಚ್ ನಲ್ಲಿ ಆಡುವುದು ಅನುಮಾನ. ಇನ್ನು ಮ್ಯಾಜಿಕ್ ಬೌಲರ್ ಹರ್ಷಲ್ ಪಟೇಲ್ ಎಂದಿನಂತೆ ತಮ್ಮ ತಂತ್ರಗಳಿಂದ ಎದುರಾಳಿ ಬ್ಯಾಟರಿಗಳನ್ನು ಕಟ್ಟಿಹಾಕಲು ಸಶಕ್ತರಿದ್ದಾರೆ. ಇನ್ನುಳಿದಂತೆ  ಪ್ಯಾಟ್ ಕಮಿನ್ಸ್, ಹರ್ಷಲ್ ಪಟೇಲ್ ಅವರು ಅನುಭವಿ ಬೌಲರುಗಳು ಇಲ್ಲ. ಹಾಗಾಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಸನ್ ರೈಸಸ್ ಹೈದರಾಬಾದ್ ತಂಡದ ಹೋಲಿಕೆಯಲ್ಲಿ ಎರಡೂ ತಂಡಗಳು ಬಲಿಷ್ಟ ವಾಗಿರುವ ಹಾಗೆ ಕಂಡು ಬಂದರೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಒಂದು ಕೈ ಮೇಲೆ ಹೋಗುತ್ತದೆ. ಆದಾಗ್ಯೂ ಪಂದ್ಯದಲ್ಲಿ ಏನು ಬೇಕಾದರೂ ಆಗಬಹುದು ನಾವು ನೀವು ಅದನ್ನು ಊಹಿಸಲು ಸಾಧ್ಯವಿಲ್ಲ . today ipl match kannada  ಏನೇ ಆಗಲಿ ಕಳೆದ ಬಾರಿಯ ಚಾಂಪಿಯನ್ ತಂಡ 2026 ರ ಮೊದಲ ಪಂದ್ಯದಲ್ಲಿ ಕಠಿಣ ಎದುರಾಳಿಯನ್ನೇ ಎದುರಿಸಲಿದೆ. 

ಇಲಿ, ಬೆಕ್ಕು,ಮತ್ತು ನಾಯಿಯ ಕಥೆ

2 thoughts on “today ipl match kannada 1 | rcb top match ಗೆಲ್ಲುತ್ತಾ?

Leave a Reply

Your email address will not be published. Required fields are marked *